Saturday, October 24, 2009

ಸಹಜ

ಸಹಜ

"ನೆರೆರಾಜ್ಯದಲಿ ನಾಯೊಂದು ನೆರೆಯಿಂದನಾಥವಾದ ಕೊತ್ತಿಕೂಸಿಗೆ
ಹಾಲೂಣಿಸಿತಂತೆ. ಇದು ದೈವಲೀಲೆ, ಆ ಕರುಣಾಕರನ ಕುರುಹು!"
ಈ ಕತೆಯ ಕೇಳಿ, ನೆರೆ ತಂದು, ಜನ ದನ ಜೀವಿಗಳನೆಲ್ಲ ಕೊಂದು,
ನಿರ್ಗತಿಕರನ್ನಾಗಿಸಿದ ನಿಷ್ಕರುಣಿಯಿಂದ ಮುಖ ತಿರುಗಿಸಿದ ಓಮಾರ.

Please right click on the image below and select 'open in a new window' to view bigger.

Friday, October 23, 2009

adButa

ಅದ್ಭುತ

ದೂಳಿನಿಂದ ದೂಳಿಗೆಂಬ ಮೂದಲಿಕೆಯ ಮಾತ ನಂಬದಿರು.
ವಾಕ್ಯಕ್ಕರ್ಥ ತುಂಬುವ, ಕಂಸಗಳನಡುವಿನ ಪದಗಳಂತೆ ನೀನೂ.
ಜಗವಿದಚ್ಚರಿಯಕ್ಷಯಪಾತ್ರೆ. ಅದರ ಗುಟ್ಟನರಿಯಲೆತ್ನಿಸುವ ನೀನೂ
ಅದರ ಒಂದದ್ಭುತ, ಎಂದು ಹುರಿದುಂಬಿಸಿದ ಓಮಾರ.

Please right click on the image below and select 'open in a new window' to view bigger.

Wednesday, October 21, 2009

Jnaana - ajnaan

ಜ್ಞಾನ - ಅಜ್ಞಾನ

ಬಲ್ಲವರು, ಬಲ್ಲಿದರು ಪಟಾಕಿ ಸುಟ್ಟು ಕಾಗದ ಹರಡಿದಾಗ
ಅನರಕ್ಷರಸ್ತ ಬಡವಿ, ಮುತುವರ್ಜಿಯಿಂದ ಬೀದಿಗುಡಿಸಿ
ಮನೆ, ರಸ್ತೆ, ಮನಗಳನ್ನು ಸ್ವಚ್ಛಗೊಳಿಸಿದುದ ಕಂಡು
ಬಲ್ಲವರಾರು, ಅಜ್ಞಾನಿಗಳಾರೆಂದು ತಲೆಕೆರೆದ ಓಮಾರ.

Please right click on the image below and select 'open in a new window' to view bigger.

Friday, October 9, 2009

muKastuti

ಮುಖಸ್ತುತಿ

ಚಿತ್ರ ಶಿಲ್ಪಿಯನು ಅಭಿನಂದಿಸಲು ಅವನ ಕೃತಿಗಳನು
ಸವಿದು ಹೊಗಳಿದರೆ ಸಾಲದೆ? ಮುಖಸ್ತುತಿ ಬೇಕೆ?

ಸೃಷ್ಟಿಕರ್ತನಿದ್ದಲ್ಲಿ, ಅವನ ವೈವಿಧ್ಯಮಯ ಸೃಷ್ಟಿಯನು ವಿಸ್ಮಯದಿ
ಸವಿದು ಅದನರಿಯಲೆತ್ನಿಸಿದರೆ ಸಾಲದೆ?, ಎಂದ ಓಮಾರ.

Please right click on the image below and select 'open in a new window' to view bigger.

Thursday, October 8, 2009

atRupti

ಅತೃಪ್ತಿ

ಅರೆ-ಮನೆಯಲ್ಲಿ, ಅರೆಹೊಟ್ಟೆ ಉಂಡ ಪುಟ್ಟ ಹುಡುಗಿ
ತುಂಬು ಹೃದಯದಿಂದ ನಕ್ಕಿದ್ದನ್ನು ಕಂಡು,
ಅರಮನೆಯಲ್ಲಿದ್ದು ಅತೃಪ್ತಿಯಿಂದ ಕೊರಗುವ
ಲಾಲಸಿಗಳ ನೆನೆದು ಅಚ್ಚರಿಗೊಂಡ ಓಮಾರ.

Please right click on the image below and select 'open in a new window' to view bigger.

karuNAmayi

ಕರುಣಾಮಯಿ?

ದೇವರನ್ನು "ಕರುಣಾಮಯಿ" ಎಂದು ಬಣ್ಣಿಸಿದವಗೆ
ದೊಡ್ಡಾಸ್ಪತ್ರೆಯ ಮಕ್ಕಳ ವಿಭಾಗದಲ್ಲಿ
ಒಂದು ರಾತ್ರೆ ಕಳೆದರೆ ನಿನ್ನ ಭ್ರಮೆ
ನೀಗುತ್ತದೆಂದು ಪ್ರಿಸ್ಕ್ರಿಪ್ಷನ್ ಬರೆದ ಓಮಾರ.

Please right click on the image below and select 'open in a new window' to view bigger.