Saturday, November 14, 2009

ಜೀನ್ ಪೂಲ್

ಜೀನ್ ಪೂಲ್


ಹಳೆಬೇರು ಹೊತ್ತ ಮರಕೆ ಹೊಸ ಚಿಗುರನಂಟಿಸಿ
ಸೊಗಸ ತರಲು ಹಳೆಯ ಮಾಲಿಯೇ ಆಗಬೇಕೆ?
ಇಂಜಿನಿಯರ್ ಚಿತ್ರ ಬಿಡಿಸಿದರೆ, ವೈದ್ಯ ಪದ್ಯ ಬರೆದರೆ,
ಒಲ್ಲೆನೆಂದಾವೆ ಕಲೆ, ಕಾವ್ಯಗಳು ಎಂದ ಓಮಾರ.


Tuesday, November 3, 2009

abaddha



ಅಬದ್ಧ

ಬಂದ ಅಚೆಯ ತ್ಸುನಾಮಿ ಮುಗ್ಧ ಹಸುಳೆಗಳ ಕೊಂಡೊಯ್ದರೆ
ಹದಗೆಟ್ಟ ಮಾನವನ ಮೇಲೆ ನಿಸರ್ಗದ ಸೇಡೆನ್ನುವುದೆ?

ಮಂತ್ರಾಲಯದಲ್ಲಿ ನೆರೆಬಂದು ಅಮಾಯಕರು ನಿರ್ಗತಿಕರಾದರೆ
ಪೂಜೆ ಸಾಂಗವಾಗಿ ನಡೆಯದ ಅಮ್ಮನ ಕೋಪವೆನ್ನುವುದೆ?

ಈ ಅಬದ್ಧಗಳ ಜನರಿಗೆ ಹಂಚಿ ವಂಚಿಸುವ ’ಜ್ಞಾನಿ’ಗಳ
ಬಾಯಿಗೆ ಕಡಿವಾಣವೇಕಿಲ್ಲವೆಂದು ಕೊರಗಿದ ಓಮಾರ.



Please right click on the image below and select 'open in a new window' to view bigger.