Sunday, May 27, 2012

ಕಾಲದುಂಗುರ




ಸಣ್ಣ ಟಣ್‍ಕಾರ,
ಕ್ಷಣಿಕ ಹೊಳಪಿನ
ಹೊರತು
ಜಾರಿತ್ತು
ನನ್ನುಂಗುರ
ನನಗರಿಯದೆಂಬಂತೆ

ತೇಜೋಮಯಿ
 ಶಕುಂತಲೆಯು
ಒನಪಿನಿಂದ
ಬೆಳ್ಳಿ ಕಿರುದೆರೆಗೆ
ಕೈಚಾಚಿದ ಚಿತ್ರವು
ಚಿಮ್ಮಿತ್ತು ಮನದಲ್ಲಿ

ತವರಿನ ತವಕದಲಿ
ಲೀನಳಾಗಿದ್ದಳೋ,
ಕೆಳಗಿದ್ದ
ಚಂಚಲ ಕನ್ನಡಿಯು ಬಿಂಬಿಸಿದ
ಸುಭದ್ರ ಭವಿಷ್ಯದಲಿ
ತಲ್ಲೀನಳಾಗಿದ್ದಳೋ?

ಅಭಯದುಂಗುರ
ಕಳಚಿ
ಆರ್ತ ಪ್ರಾರ್ಥನೆಗಿಂತ
ಆಳಕ್ಕೆ ಮುಳುಗಿತ್ತು.
ಇಚ್ಛಾಸ್ಮರಣಿ
ಬಲಶಾಲಿಗೆ
ಆಕರ್ಷಿತ ಹೆಣ್ಣು-ಮಗುವಿನ
ದುಬಾರಿ ತಪ್ಪು ಅದು.

ಭಂಗಾರ ಗರ್ಭದ
ಪಾಪದ ಮೀನು
ತೇಲಿ ಬಂದು,
ಹಸಿದ ಕೈಗಳಿಂದ
ಸಿಗಿದು ಸೀಳಾಗಿರದಿದ್ದರೆ
ಅದೆಂತಃ ಅಂತ
ಕಾದಿತ್ತೋ ಆಕೆಗೆ?


ಆ ಶಪಿತ ರಾಜನ
ಗೋಜೇ ಇಲ್ಲದಿರೆ
ಅವಳ ಬಾಳು
ಹಸನಾಗಿದ್ದಿದ್ದೀತೆ,
ತನ್ನ ತಪ್ಪಿಗೆ
ಹಳಿಯುವ ತವರಿಗೆ
ಹಿಂಬಂದರೂ ಸೈ?

ಕಣ್ಣಿಗೆ ಎಟಕುವುದೆಲ್ಲವ
ಗೆದ್ದು ತನ್ನದೆಂದ
ಅವಳ ಕೋಲ್ಮಿಂಚು ಮಗನ
ನಾಡಾದ ಈ
ಭಾರತ
ಪ್ರಜೆಗಳಾಗಿರುತ್ತಿರಲಿಲ್ಲವೇನೊ
ನಾವು ಆಗ.


ಬಲಿಷ್ಠ ಅತಿಕ್ರಮಿಗಳ
ಕತ್ತಿಗಳಡಿ
ಕುಗ್ಗುತ್ತಿರಲಿಲ್ಲವೇನೊ
ನಾವಾಗ;
ನಿಜಗಳನು
ಮನಸ್ಸೇಚ್ಛೆ ನಿರ್ಧರಿಸಿಬಿಡುವ
ಶಕ್ತಿವಂತರು ನಿರ್ಮಿಸಿದ
ಚರಿತ್ರೆಗಳನ್ನು

ಧಿಕ್ಕರಿಸಿಬಿಡುತ್ತಿದ್ದೆವಾನೋ...




If you cannot read the above, 

please click on the pictures below to see larger.



No comments: