ಇಷ್ಟೇ ಅಲ್ಲ, ಜ್ಞಾಪಕ ಬಂದ ಹಾಗೆ ಸೇರಿಸ್ತಿರ್ತೀನಿ
ಇವುಗಳಲ್ಲಿ ಹಲವು ಉಪಮೆಗಳು. ಆದರೆ ಬಳಕೆಯಲ್ಲಿ ಅವುಗಳು ಗಾದೆಗಳನ್ನು ಹೋಲುವುದರಿಂದ ಅವನ್ನೂ ಸೇರ್ಸಿದೀನಿ. ಅಲ್ಲದೆ ಕೆಲವು ಸಂಸ್ಕೃತದ ನಾಣ್ಣುಡಿಗಳನ್ನೂ ಸೇರ್ಸಿದೀನಿ, ಯಾಕಂದ್ರೆ ಅವು ಕನ್ನಡದ್ದೇನೋ ಅನ್ನೋ ಹಾಗೆ ಉಪಯೋಗಿಸ್ತಾರೆ.
1. ಅಂಗೈಯಲ್ಲಿ ಬೆಣ್ಣೆಇಟ್ಕೊಂಡು ತುಪ್ಪಕ್ ಊರೆಲ್ಲ ಹುಡುಕಿದರಂತೆ
2. ಅಂಬಲಿ ಕುಡ್ಯೋವ್ನಿಗೆ ಮೀಸೆ ಹಿಡ್ಯೋವ್ನೊಬ್ಬ
3. ಅಕ್ಕಿಮೇಲ್ ಆಸೆ, ನೆಂಟ್ರ್ ಮೇಲ್ ಪ್ರೀತಿ
4. ಅಗಸ ಹೊಸದ್ರಲ್ ಗೋಣಿ ಎತ್ತೆತ್ತ್ ಒಗೆದ್ನಂತೆ
5. ಅಗಸರ ಕತ್ತೆ ದೊಂಬರಿಗೆ ತ್ಯಾಗ
6. ಅತ್ತೆಗೊಂದ್ಕಾಲ ಸೊಸೆಗೊಂದ್ಕಾಲ
7. ಅಪ್ಪ ಹಾಕಿದ್ ಆಲದ್ಮರ ಅಂತ ಅದಕ್ ನೇಣು ಹಾಕಿಕೊಳ್ಳಕ್ಕಾಗತ್ಯೇ?
8. ಅಪ್ಪಾಭಟ್ಟ್ರ ಮಗಳಾಗಿ, ತಿಪ್ಪಾಭಟ್ಟ್ರ ಸೊಸೆಯಾಗಿ, ಪಂಚ ಪಾಂಡವರು ಅಂದ್ರೆ ನಂಗೊತ್ತಿಲ್ವ, ಮಂಚದ ಕಾಲಿನ ಹಾಗೆ ಮೂರ್ಜನ ಅಂದು ಎರಡು ತೋರ್ಸಿ ಒಂದು ಬರೆದ್ಲಂತೆ.
9. ಅಯ್ಯಣ್ಣನ ಕುದುರೆಗೆ ಮೈಯೆಲ್ಲ ಗಾಯ
10. ಅಲ್ಪನಿಗ್ ಐಶ್ವರ್ಯ ಬಂದ್ರೆ ಮಧ್ಯ ರಾತ್ರಿಲಿ ಕೊಡೆ ಹಿಡಿದ
11. ಅವ್ರಿವ್ರ್ ಮಾತ್ಕೇಳ್ಬೇಡ ನನ್ಮಾತ್ಕೇಳು, ನಡುಬೀದೀಲ್ನಿಂತ್ಕೊಂಡು ಪುಡಿಮಣ್ಣು ಹುಯ್ಕೊ ಅಂದ್ರಂತೆ
12. ಅಳೋ ಗಂಡ್ಸನ್ನ ನಗೋ ಹೆಂಗ್ಸನ್ನ ನಂಬ ಬಾರ್ದು
13. ಆಂಜನೇಯನೇ ಹಗ್ಗ ಕಡೀತಿರ್ಬೇಕಾದ್ರೆ ನಮ್ಗೆಲ್ಲಿಂದ ಶ್ಯಾವಿಗೆ ಕೊಡ್ತಾನೆ!?
14. ಆಡಿದ್ದೇ ಆಡೋ ಕಿಸಿಬಾಯಿ ದಾಸಯ್ಯ
15. ಆತುರಗಾರನಿಗೆ ಬುದ್ಧಿ ಮಟ್ಟು
16. ಆನೆ ಹೊಟ್ಟೆ, ಸೂಜಿ ಗಂಟ್ಳು
17. ಆರಂಭ ಶೂರತ್ವ
18. ಆರಕ್ಕೆ ಹತ್ತಲ್ಲ, ಮೂರಕ್ಕೆ ಇಳಿಯಲ್ಲ
19. ಆಷ್ಟರ ಮಟ್ಟಿಗೆ ಕಂಡ್ರಾ ಕೃಷ್ಣಂಭಟ್ಟ್ರೇ, ಮುಪ್ಪಿನ ಕಾಲಕ್ಕೆ ಮೂರ್ಜನ ಹೆಂಡ್ರು
20. ಆಳ್ ಮಾಡಿದ್ ಕೆಲ್ಸ ಹಾಳು
21. ಇದ್ದಿದ್ ಇದ್ದಂಗ್ಹೇಳಿದ್ರೆ ಕೆಂಡ್ದಂತಾ ಕೋಪ
22. ಇರಳ್ಕಂಡ್ಭಾವೀಲ್ ಹಗಲ್ಬಿದ್ರಂತೆ
23. ಈಚಲು ಮರದ ಕೆಳಗೆ ನಿಂತು ಮಜ್ಜಿಗೆ ಕುಡ್ದಂಗೆ
24. ಉಡಕ್ಕಿಲ್ದವಳು ಪಟ್ಟೆ ಸೀರೆ ತೆಗೆದ್ಲಂತೆ
25. ಉತ್ತರನ ಪೌರುಷ ಒಲೆ ಮುಂದೆ
26. ಉದ್ದುದ್ದೋರ್ಗ್ ಬುದ್ಧಿ ಇಲ್ಲ
27. ಊಟಕ್ಕಿಲದ್ ಉಪ್ಪಿನ್ಕಾಯಿ
28. ಊದೋದು ಕೊಟ್ಟು ಬಾರ್ಸೋದು ತೊಗೊಂಡ್ರಂತೆ
29. ಊರಿಗೆ ಬಂದವ್ಳು ನೀರಿಗೆ ಬರಲ್ವೆ?
30. ಊರು ಕೊಳ್ಳೆಹೋದ್ಮೇಲೆ ಕೋಟೆ ಬಾಗ್ಲು ಹಾಕಿದ್ರಂತೆ
31. ಎಂಟ್ ವರ್ಷಕ್ ಮಗ ದಂಟು ಅಂದ
32. ಎಕ್ಕಡನ ರೇಶಿಮೆ ಶಾಲಲ್ಲಿ ಸುತ್ತಿ ಹೊಡೆದ್ರಂತೆ
33. ಎತ್ತು ಏರಿಗೆಳೀತು ಕೋಣ ನೀರ್ಗೆಳೀತು
34. ಎದ್ರಾ ಬಾಹ್ಮಣ್ರೆ ಅಂದ್ರೆ ಗುದ್ದಾಟಕ್ಕೆ
35. ಎಲ್ಲಾರ್ಮನೆ ದೋಸೇನೂ ತೂತೇ
36. ಏತಿ ಅಂದ್ರೆ ಪ್ರೇತಿ
37. ಏನೇ ಗಿಡ್ಡಿ ಓಡಾಟ, ಶಾನ್ಭೋಗ್ರ್ ಮನೇಲ್ ಹಬ್ದೂಟ
38. ಏಲೆ ಎತ್ತೋ ಗುಂಡ ಅಂದ್ರೆ ಉಂಡವ್ರೆಷ್ಟ್ ಮಂದಿ
39. ಒಂದ್ ಹೊತ್ತುಂಡವ ಯೋಗಿ, ಎರಡ್ ಹೊತ್ತುಂಡವ ಭೋಗಿ, ಮೂರ್ ಹೊತ್ತುಂಡವ ರೋಗಿ, ನಾಕ್ ಹೊತ್ತುಂಡವನ್ ಎತ್ಕೊಂಡ್ ಹೋಗಿ
40. ಒಲ್ಲದ್ ಗಂಡಂಗ್ ಮೊಸರಲ್ ಕಲ್ಲು
41. ಓತಿಕ್ಯಾತಕ್ಕೆ ಬೇಲಿ ಸಾಕ್ಷಿ
42. ಕಂಡವ್ರ್ ಮಕ್ಕಳ್ನ್ ಬಾವೀಗ್ತಳ್ಳಿ ಆಳನೋಡೋದು
43. ಕಪ್ಪೇನ ತಕಡೀಲ್ ಹಾಕ್ದಂಗೆ
44. ಕಳ್ಳನ್ ನಂಬಿದ್ರೂ ಕುಳ್ಳನ್ ನಂಬಾರ್ದು
45. ಕಳ್ಳನ್ಮನಸ್ಸು ಹುಳ್ಹುಳ್ಗೆ
46. ಕಾಗೆ ಕಾ ಅನ್ನಕ್ಮುಂಚೆ ಬಡಿದು ಬಾಯಿಗೆ ಹಾಕ್ಕೊಂಡ್ರಂತೆ.
47. ಕಾಗೆ ವಾಂತಿ ಮಾಡಿದ ಕತೆ
48. ಕಾರ್ಯವಾಸಿ ಕತ್ತೆಕಾಲ್ಕಟ್ಟು
49. ಕಾಲು ಸುಟ್ಟ ಬೆಕ್ಕಿನ ತರಹ
50. ಕಾಸಿಗೆ ಹೋದ ಮಾನ ಆನೆ ಕೊಟ್ರೂ ಬರ್ದು
51. ಕುಂಬಳ್ಕಾಯ್ ಕಳ್ಳ ಅಂದ್ರೆ ಹೆಗಲ್ ಮುಟ್ ನೋಡ್ಕೊಂಡ್ನಂತೆ
52. ಕುಂಬಾರಂಗ್ ಒಂದ್ ವರ್ಷ, ದೊಣ್ಣೇಗ್ ಒಂದ್ನಿಮ್ಷ
53. ಕುಣೀಲಾರದ ಸೂಳೆ ನೆಲ ಡೊಂಕು ಅಂದ್ಲಂತೆ
54. ಕುದುರೆ ಕಂಡ್ರೆ ಕಾಲ್ನೋವು
55. ಕುಲಗೆಟ್ರೂ ಸುಖವಿಲ್ಲ
56. ಕೂತು ಉಂಡ್ರೆ ಕುಡ್ಖೆ ಹಣ ಸಾಲ್ದು
57. ಕೂಸ್ ಹುಟ್ಟಕ್ಮುಂಚೆ ಕುಲಾವಿ ಹೊಲ್ದ್ರಂತೆ
58. ಕೆಲಸ್ವಿಲ್ಲದ್ಕುಂಬಾರ ಮಗನ್ಕುಂಡೆ ತಟ್ಟಿದ್ನಂತೆ
59. ಕೆಲಸ್ವಿಲ್ಲದ್ಬಡ್ಗಿ ಮಗನ್ ಕುಂಡೆ ಕೊರೆದ್ನಂತೆ
60. ಕೈ ಕೆಸರಾದರೆ ಬಾಯ್ ಮೊಸರು
61. ಕೊಂಕಣ ಸುತ್ತಿ ಮೈಲಾರಕ್ಕೆ
62. ಕೋಣನ್ಮುಂದೆ ಕಿಂದರಿ ನುಡಿಸ್ದಂಗೆ(ಬಾರಿಸ್ದಂಗೆ)
63. ಕೋತಿ ತಾನ್ಕೆಡೋದಲ್ದೆ ವನನೆಲ್ಲ ಕೆಡಿಸ್ತಂತೆ
64. ಕೋತಿ ಮೊಸರನ್ನ ತಿಂದ್ ಹೋತದ್ ಗಡ್ಡಕ್ ಮೆತ್ತಿತಂತೆ
65. ಕೋತಿ ಹುಣ್ಣು
66. ಕೋಲು ಮುರಿಬಾರ್ದು, ಹಾವು ಸಾಯ್ಬಾರ್ದು
67. ಕೋಳೀನ ಕೇಳಿ ಮಸಾಲೆ ಅರಿತಾರಾ?
68. ಗಂಡ್ ಹೆಂಡ್ರ್ ಜಗಳ್ದಲ್ ಕೂಸ್ ಬಡ್ವಾಯ್ತು
69. ಗೋಕುಲಾಷ್ಟಮೀಗೂ ಇಮಾಮ್ ಸಾಬ್ರಿಗೂ ಏನ್ ಸಂಬಂಧ?
70. ಚಾಪೆ ಕೆಳಗ್ ನುಗ್ಗಿದ್ರೆ ರಂಗೋಲೆ ಕೆಳಗ್ ನುಗ್ಗಿದ್ರಂತೆ
71. ಜಗಲಿ ಹಾರಿ, ಗಗನ ಹಾರಬೇಕು
72. ಜನ ಮರುಳೋ ಜಾತ್ರೆ ಮರುಳೋ?
73. ಜಾಣ ಕಿವುಡು
74. ತಾಯಿಯಂತೆ ಮಗಳು ನೂಲ್ನಂತೆ ಸೀರೆ
75. ತುಂಬಿದ್ ಕೊಡ ತುಳ್ಕಲ್ಲ
76. ದಿನಾ ಸಾಯೋವ್ರಿಗ್ ಅಳೋವ್ರ್ಯಾರು
77. ದುಡ್ಡೇ ದೊಡ್ಡಪ್ಪ
78. ದುರ್ಭಿಕ್ಷದಲ್ಲಿ ಅಧಿಕಮಾಸ
79. ದುಷ್ಟ್ರನ್ಕಂಡ್ರೆ ದೂರ ಇರು
80. ದೂರದ ಬೆಟ್ಟ ಕಣ್ಣಿಗ್ ನುಣ್ಣ್ಗೆ
81. ದೇವ್ರು ವರ ಕೊಟ್ರೂ ಪೂಜಾರಿ ಕೊಡ
82. ಧರ್ಮಕ್ ದಟ್ಟಿ ಕೊಟ್ರೆ ಹಿತ್ತಲ್ಗ್ ಹೋಗಿ ಮೊಳ ಹಾಕಿದ್ರಂತೆ
83. ನವಿಲನ್ ನೋಡಿ ಕೆಂಭೂತ ಗರಿ ಕೆದರ್ಕೊಂಡ್ ಕುಣೀತಂತೆ
84. ನಾಯಿ ಬೊಗಳಿದ್ರೆ ದೇವ್ಲೋಕ ಹಾಳೆ?
85. ನಾಯಿ ಹೆಸರು ಸಂಪಿಗೆ
86. ನಾಯಿಬಾಲ ಡೊಂಕು
87. ನಾಯೀಗ್ಯಾಕ್ ಶ್ಯಾಮಿಗೆ (ಶ್ಯಾವಿಗೆ) ಪಾಯ್ಸ್
88. ಪಾಪಿ ಸಮುದ್ರಕ್ ಹೋದ್ರೂ ಮೊಣಕಾಲುದ್ದ ನೀರು
89. ಪ್ರಾಣ ಹೋದ್ರೂ ಪರ್ವಾಗಿಲ್ಲ ಪ್ರಾಸ ಹೋಗ್ಲಿಲ್ಲ ಅಂದ್ನಂತೆ
90. ಬಾಣ್ಲೆ ಇಂದ ಬೆಂಕೀಗ್ ಬಿದ್ದಂಗ್ ಆಯ್ತು
91. ಬಾಯ್ಬಿಟ್ರ್ ಬಣ್ಣ್ಗೇಡು
92. ಬಿಸಿತುಪ್ಪ, ನುಂಗೋಹಾಗಿಲ್ಲ ಉಗ್ಯೋಹಾಗಿಲ್ಲ
93. ಬೀದೀಲ್ಹೋಗೋ ಮಾರಿ ಮನೇಗ್ಬ್ಂದ್ ಹೋಗವ್ವ
94. ಬೀಸೋ ದೊಣ್ಣೆ ತಪ್ಪಿದ್ರೆ ನೂರ್ ವರ್ಷ ಆಯಸ್ಸು
95. ಬೂದಿಮುಚ್ಚಿದ ಕೆಂಡ
96. ಬೆಕ್ಕಿಗೆ ಚೆಲ್ಲಾಟ ಇಲೀಗೆ ಪ್ರಾಣ್ಸಂಕ್ಟ
97. ಬೆಳೆಯುವ ಮರ ಮೊಳಕೆಯಲ್ಲಿ
98. ಮಂಗನ ಕೈಲಿ ಮಾಣಿಕ್ಯ ಕೊಟ್ಟಂಗೆ
99. ಮದುವೆ ಆಗೋ ಬ್ರಾಹ್ಮಣ ಅಂದ್ರೆ ನೀನೇ ನನ್ಹೆಂಡ್ತಿ ಅಂದ್ನಂತೆ
100. ಮದ್ವೆ ಆಗೋತನಕ ಹುಚ್ ಬಿಡ್ದು, ಹುಚ್ ಬಿಡೋತನಕ ಮದ್ವೆ ಆಗ್ದು
101. ಮನೆಗೆ ಮಾರಿ ಪರರಿಗೆ ಉಪಕಾರಿ
102. ಮನೇಲ್ಹುಲಿ ಹೊರಗಿಲಿ
103. ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ
104. ಮೌನಂ ಸಮ್ಮತಿ ಲಕ್ಷಣಂ
105. ಯಥಾ ರಾಜ ತಥಾ ಪ್ರಜಾ
106. ಯಾರ್ದೋ ಸೀರೆ ಎಲ್ಲವ್ವನ್ ಜಾತ್ರೆ
107. ಯಾವ ಹುತ್ತದಲ್ಲಿ ಯಾವ ಹಾವೋ
108. ರಾತ್ರಿಯೆಲ್ಲ ರಾಮಾಯ್ಣ ಕೇಳಿ ರಾಮಂಗೂ ಸೀತೆಗೂ ಏನ್ಸಂಬಂಧ ಅಂದ್ರಂತೆ
109. ರಾಮೇಶ್ವರಕ್ ಹೋದ್ರೂ ಶನೇಶ್ವರಕಾಟ ಬಿಡ್ದು
110. ರಾವಣನ್ ಹೊಟ್ಟೇಗ್ ಅರ್ಕಾಸು ಮಜ್ಜಿಗೆ
111. ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು
112. ರೋಗಿ ಬಯ್ಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಅದೆ
113. ವಿನಾಶಕಾಲೇ ವಿಪರೀತ ಬುದ್ಧಿಹಿ
114. ವೇದ ಸುಳ್ಳಾದ್ರೂ ಗಾದೆ ಸುಳ್ಳಾಗ್ದು
115. ವೇದಾಂತ ಅಂಬಲಿಕ್ಕೆ, ಬದನೆಕಾಯಿ ತಿಂಬ್ಲಿಕ್ಕೆ
116. ಶುಭಸ್ಯ ಶೀಘ್ರಂ
117. ಸನ್ಯಾಸಿ ಸಂಸಾರ
118. ಸರ್ವ ಚಿತ್ತಾರ ಮಶಿ ನುಂಗಿತು
119. ಸಾರ್ಸಿದ್ ಮನೇಲ್ ಬೋಳಪ್ ಹೇತ
120. ಸ್ವತಃ ಬುದ್ಧಿ ಇಲ್ಲ, ಬೇರೇವ್ರು ಹೇಳಿದ್ರೆ ಕೇಳಲ್ಲ
121. ಹಂಸಕ್ಷೀರ ನ್ಯಾಯ
122. ಹಲ್ಲಿದ್ರೆ ಕಡ್ಲೆ ಇಲ್ಲ, ಕಡ್ಲೆ ಇದ್ರೆ ಹಲ್ಲಿಲ್ಲ
123. ಹಳೇ ಗಂಡನ್ ಪಾದವೇ ಗತಿ
124. ಹಾಗಾಲ್ಕಾಯ್ಗೆ ಬೇವಿನ್ಕಾಯ್ ಸಾಕ್ಷಿ
125. ಹಾಸಿಗೆ ಇದ್ದಷ್ಟು ಕಾಲು ಚಾಚು
126. ಹಿತ್ತಲ ಗಿಡ ಮದ್ದಲ್ಲ
127. ಹುಚ್ಮುಂಡೆ ಮದುವೇಲ್ ಉಂಡವ್ನೇಜಾಣ
128. ಹೆಂಡತಿ ದಾಕ್ಷಿಣ್ಯಕ್ಕೆ ಸಿಂಬಳ್ಬುರುಕ ಭಾವ್ಮೈದ್ನನ್ ಎಂಜ್ಲ್ ತಿಂದ್ನಂತೆ
129. ಹೆತ್ತವರಿಗ್ ಹೆಗ್ಣ ಮುದ್ದು
130. ಹೊಟ್ಟೇಗ್ ಹಿಟ್ಟಿಲ್ಲ ಜುಟ್ಟಿಗ್ ಮಲ್ಲಿಗೆ ಹೂವು
131. ಹೊಸ ವೈದಂಗಿತ ಹಳೆ ರೋಗಿ ಮೇಲು
132. ಹೊಸ್ನೀರ್ ಬಂದು ಹಳೇ ನೀರ್ ಕೊಚ್ಕೊಂಡ್ ಹೋಯ್ತು
133. ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ ಇಂದ
No comments:
Post a Comment